ಅಮ್ಮ

ಗೋಪಾಲ ಕುಲ್ಕರ್ಣಿ | 21 Dec 2023

ತಿಂಗಳಾಯಿತು ನೀ ಮರೆಯಾಗಿ
ಹಂಬಲಿಸುತಿಹೆನು ಆ ನಿನ್ನ ಕರೆಗಾಗಿ
ಬಿಡುವಿಲ್ಲದಿರ ಬಾಳಿನ ಗೋಳಾಟದಲ್ಲಿ
ಸಿಗುತ್ತಿದ್ದ ಆ ತುಸು ನೆಮ್ಮದಿಗಾಗಿ

*****

ತಿಂಗಳುಗಳಾಯಿತು ಏಂಟು
ಮರೆಯುತಿಹೆನು ನಿನ್ನ ನಂಟು
ಓಡುತಿರಲು ಬಾಳೆಂಬ ಓಟ
ಹಿಂಬದಿಗೆ ಜಾರುತ್ತಿರುವ ನೆನಪೊಂದೆ ದಿಟ